ವಿಜಯನಗರ ಕಾಲುವೆಗೆ ೧೧ ತಿಂಗಳು ನೀರು ಹರಿಸಿ
Nov 24 2023, 01:30 AM ISTತುಂಗಭದ್ರಾ ಅಣೆಕಟ್ಟು ನಿಮಾರ್ಣದ ಪೂರ್ವದಲ್ಲಿ ವಿಜಯನಗರ ಅರಸರ ಕಾಲದಿಂದಲೂ ರಾಯ, ಬಸವ, ತುರ್ತಾ, ಕಾಳಕಟ್ಟ ಕಾಲುವೆಗಳು ನಿರಂತರ ನೀರು ಒದಗಿಸುವ ಮೂಲಕ ಈ ಭಾಗದ ರೈತರು ಜನ- ಜಾನುವಾರುಗಳಿಗೆ ಆಶ್ರಯವಾಗಿದ್ದವು. ತುಂಗಭದ್ರಾ ಅಣೆಕಟ್ಟುಗಳು ನಿರ್ಮಾಣದ ನಂತರವೂ ವರ್ಷ ೧೧ ತಿಂಗಳು ನೀರು ಬಿಡುವ ಮೂಲಕ ಈ ಭಾಗದ ರೈತರ ಜೀವನಾಡಿಯಾಗಿದ್ದು, ಈ ವರ್ಷ ಈಗಾಗಲೇ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಇದರಿಂದ ಈ ಭಾಗದ ರೈತರು ಹಾಗೂ ಜನ ಜಾನುವಾರು ಸೇರಿದಂತೆ ರೈತರ ಬೆಳೆಗಳಿಗೂ ನೀರು ಸಿಗದೇ ತೊಂದರೆಯಾಗಿದೆ.