ಹೊಳೆನರಸೀಪುರಕ್ಕೆ ಈಗ ಸ್ವಾತಂತ್ರ್ಯ ಬಂದಿದೆ
Nov 26 2024, 12:46 AM ISTಹೊಳೆನರಸೀಪುರದಲ್ಲಿ ಬದಲಾವಣೆಯ ಪರ್ವ ಪ್ರಾರಂಭಗೊಂಡಿದೆ. ಜತೆಗೆ ತಾಲೂಕಿನ ದಿಕ್ಕು, ದೆಸೆ, ವಾಸ್ತು ಎಲ್ಲವೂ ಬದಲಾಗುತ್ತಿದ್ದು, ಒಂದರ್ಥದಲ್ಲಿ ಸ್ವಾತಂತ್ರ್ಯ ಲಭಿಸಿದೆ. ಇಲ್ಲಿಯ ತನಕ ಯಾವುದೇ ಕಾರ್ಯಕ್ರಮದಲ್ಲಿ ಪಟ್ಟಣದ ಯಾವುದೋ ಮನೆ ಅಥವಾ ತೋಟದ ಮನೆಯಲ್ಲಿ ಮಾತ್ರ ವಿದ್ಯುತ್ ದೀಪಗಳು ಉರಿಯುತ್ತಿತ್ತು. ಇಂದು ಪಟ್ಟಣವೆಲ್ಲ ದೀಪಾಲಂಕಾರದಿಂದ ಬೆಳಗುತ್ತಿದೆ. ನಿಮ್ಮೂರಿಗೆ ಹೊಸ ಮೆರುಗು ತಂದಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಜೆ.ಗೌಡ ಅವರು ಶಾಸಕ ಎಚ್.ಡಿ.ರೇವಣ್ಣ ಅವರ ಕಾರ್ಯವೈಖರಿಯನ್ನು ಟೀಕಿಸಿದರು.