ದರ್ಶನ್ ಪಾರು ಮಾಡಲು ಯತ್ನಿಸಿದ್ದ ಪಟ್ಟಣಗೆರೆ ವಿನಯ್!‘ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಎರಡೂವರೆ ಲಕ್ಷ ರು. ಹಣಕಾಸು ವಿಚಾರವಾಗಿ ನನ್ನ ಪರಿಚಿತ ಹುಡುಗರು ಕೊಲೆ ಮಾಡಿದ್ದಾರೆ. ಠಾಣೆಗೆ ಬಂದು ಅವರೇ ಶರಣಾಗುತ್ತಾರೆ’ ಎಂದು ನಟ ದರ್ಶನ್ ಆಪ್ತ ಪಟ್ಟಣಗೆರೆ ವಿನಯ್ ಕಾಮಾಕ್ಷಿಪಾಳ್ಯದ ಠಾಣೆ ಸಬ್ ಇನ್ಸ್ಪೆಕ್ಟರ್ಗೆ ಹೇಳಿದ್ದ ಸಂಗತಿ ಬೆಳಕಿಗೆ ಬಂದಿದೆ.