ಅಂದುಕೊಂಡಂತೆ ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ಶೇ.27ರಷ್ಟು ಪ್ರತಿ ತೆರಿಗೆ ಘೋಷಿಸಿದೆ. ಮೇಲ್ನೋಟಕ್ಕೆ ಇದರಿಂದ ಭಾರತದ ರಫ್ತಿಗೆ ಭಾರೀ ಹೊಡೆತ ಬೀಳುವುದು ನಿಶ್ಚಿತ. ಆದರೆ, ಏಷ್ಯಾದ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಭಾರತದ ಮೇಲೆ ಹಾಕಿರುವ ತೆರಿಗೆ ಕಡಿಮೆ.
ವಕ್ಫ್ ಮಂಡಳಿಯ ಭೂಕಬಳಿಕೆ ವಿರೋಧಿಸಿ ಕಳೆದ 173 ದಿನಗಳಿಂದ ಹೋರಾಟ ನಡೆಸಿಸುತ್ತಿದ್ದ ಕೇರಳದ ಮುನಬಂ ಗ್ರಾಮಸ್ಥರು ಲೋಕಸಭೆಯಲ್ಲಿ ಮಂಗಳವಾರ ತಡರಾತ್ರಿ ಮಸೂದೆ ಅಂಗೀಕಾರವಾಗುತ್ತಿದಂತೆ ಸಂಭ್ರಮಿಸಿದ್ದು, ‘ ನರೇಂದ್ರ ಮೋದಿ ಜಿಂದಾಬಾದ್’ ಎಂದು ಪ್ರಧಾನಿಗೆ ಜೈಕಾರ ಕೂಗಿದ್ದಾರೆ.
ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಆಸ್ತಿ ವಿವರಗಳನ್ನು ಸಾರ್ವಜನಿಕವಾಗಿ ಘೋಷಣೆ ಮಾಡಲು ಸಿಜೆಐ ಸೇರಿದಂತೆ ಸುಪ್ರೀಂಕೋರ್ಟ್ನ ನ್ಯಾಯಾಧೀಶರು ನಿರ್ಧರಿಸಿದ್ದಾರೆ.
ವಕ್ಫ್ ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ ತರುವ, ಮಂಡಳಿಯ ಪರಮಾಧಿಕಾರ ಕಟ್ ಮಾಡುವ, ಮಹಿಳೆಯರಿಗೆ ಮತ್ತು ಮುಸ್ಲಿಂ ಸಮುದಾಯದಲ್ಲಿನ ಎಲ್ಲಾ ವರ್ಗಗಳಿಗೂ ಮಂಡಳಿಯಲ್ಲಿ ಅವಕಾಶ ಕೊಡುವ ಐತಿಹಾಸಿಕ ವಕ್ಫ್ ತಿದ್ದುಪಡಿ ವಿಧೇಯಕವನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.
ಮುಸ್ಲಿಂ ಸಮುದಾಯದಲ್ಲಿನ ಎಲ್ಲಾ ವರ್ಗಗಳಿಗೂ ಮಂಡಳಿಯಲ್ಲಿ ಅವಕಾಶ ಕೊಡುವ ಐತಿಹಾಸಿಕ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆ ಬುಧವಾರ ತಡರಾತ್ರಿ 2 ಗಂಟೆಗೆ ಅನುಮೋದನೆ ನೀಡಿದೆ.