ಮೊದಲ ಮಳೆಗೆ ಗುಂಡಿ ಬಿದ್ದ ಅಯೋಧ್ಯೆಯ ರಾಮಪಥ, ಆರು ಅಧಿಕಾರಿಗಳು ಸಸ್ಪೆಂಡ್ಭಾರೀ ಮಳೆಗೆ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ರಾಮಪಥ ರಸ್ತೆಯಲ್ಲಿ ಗುಂಡಿ ಬಿದ್ದು, ರಸ್ತೆ ಜಲಾವೃತಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಲೋಕೋಪಯೋಗಿ ಮತ್ತು ಜಲ ನಿಗಮದ ಒಟ್ಟು ಆರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.