ಪತಂಜಲಿ ವಿವಾದ: ದೊಡ್ಡ ಜಾಹೀರಾತು ಪ್ರಕಟಿಸಿ ರಾಮದೇವ್ ಕ್ಷಮೆಅಲೋಪತಿ ಕುರಿತು ಆಕ್ಷೇಪಾರ್ಹ ಮಾಹಿತಿ ನೀಡಿ ತಮ್ಮ ಉತ್ಪನ್ನಗಳನ್ನು ವೈಭವೀಕರಿಸಿದ ಆರೋಪ ಹೊತ್ತಿರುವ ಪತಂಜಲಿ ಆಯುರ್ವೇದ ಮುಖ್ಯಸ್ಥರಾದ ಯೋಗಗುರು ಬಾಬಾ ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ, ಬುಧವಾರ ದೊಡ್ಡ ಹಾಹೀರಾತುಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ 2 ದಿನದಲ್ಲಿ 2ನೇ ಬಾರಿ ಕ್ಷಮೆ ಕೇಳಿದ್ದಾರೆ.