ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಮಹಾಲಿಂಗಪುರ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಶ್ರೀಕೃಷ್ಣ ಪರಮಾತ್ಮನ ಜನನ, ಬಾಲ್ಯ, ವಿವಾಹ, ಪವಾಡ, ತುಂಟಾಟ, ಭಗವದ್ಗೀತೆ ಬೋಧನೆ, ಗೀತಾ ಸಾರ ಹೀಗೆ ವಿವಿಧ ಸನ್ನಿವೇಶದ ವೇಷ ಧರಿಸಿದ ಮಕ್ಕಳು ದ್ವಾಪರಯುಗವನ್ನೇ ಸೃಷ್ಟಿಸಿದರು.