ಕೃಷ್ಣಾ ಆರತಿ, ಪುಣ್ಯಸ್ನಾನ ಕಾರ್ಯಕ್ರಮಕ್ಕೆ ಭರದ ಸಿದ್ಧತೆಆಗಸ್ಟ್ 16ರಂದು ತಾಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಹಾರಾಜರ ಪುಣ್ಯ ಗದ್ದುಗೆ ಸ್ಥಳ, ಉತ್ತರ ವಾಹಿನಿ ಕೃಷ್ಣೆಯ ತೀರದಲ್ಲಿ ಎಂಆರ್‌ಎನ್ ಫೌಂಡೇಷನ್ ಹಾಗೂ ತಾಲೂಕಿನ ರೈತರ ಆಶ್ರಯದಲ್ಲಿ ಏರ್ಪಡಿಸಲಾಗಿರುವ ಕೃಷ್ಣಾ ಪುಣ್ಯಸ್ನಾನ, ಕೃಷ್ಣಾ ಆರತಿ, ಕುಂಭ ಮೇಳ ಮಾದರಿಯಲ್ಲಿ ನಾಗಾ ಸಾಧುಗಳ, ಸಂತರ ಸಮ್ಮಿಲನ, ಮಾಜಿ ಸಚಿವ ಮುರುಗೇಶ ನಿರಾಣಿ ಅವರ 60ನೇ ವರ್ಷದ ಜನ್ಮದಿನ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಹಾರಾಜರ ಮಠದ ಆವರಣವನ್ನು ಸಿಬ್ಬಂದಿ ಸ್ವಚ್ಛಗೊಳಿಸುವುದು, ಕೃಷ್ಣೆಯ ಸ್ನಾನಘಟ್ಟ ಸ್ಥಳದ ಸ್ವಚ್ಛತಾ ಕಾರ್ಯಗಳು ನಡೆಯುತ್ತಿವೆ.