ನಿರಂತರ ಮಳೆಗೆ ಜಿಲ್ಲೆಯಲ್ಲಿ 330ಕ್ಕೂ ಅಧಿಕ ಮನೆಗಳಿಗೆ ಹಾನಿಬಾಗಲಕೋಟೆ : ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯ ಪರಿಣಾಮ ಜಿಲ್ಲೆಯ ಮುಧೋಳ, ಬೀಳಗಿ, ಕೆರೂರ, ಬಾದಾಮಿ, ಮಹಾಲಿಂಗಪುರ ಸೇರಿದಂತೆ ವಿವಿಧೆಡೆ ಮಳೆಯಿಂದ 330ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿದ್ದು, ಬಾಗಲಕೋಟೆ ಹಳೆ ನಗರದ ಕಿಲ್ಲಾ ಬಡಾವಣೆಯಲ್ಲಿನ ಮಣ್ಣಿನ ಮನೆಗಳು ಸಹ ಕುಸಿಯಲಾರಂಭಿಸಿವೆ. ಮನೆ ಕುಸಿತದಿಂದ ಓರ್ವ ಮಹಿಳೆ ಗಾಯಗೊಂಡಿದ್ದಾರೆ.