ಪುರಸಭೆಗೆ ಲೋಕಾಯುಕ್ತರ ಭೇಟಿ: ದಾಖಲೆ ಪರಿಶೀಲನೆಗುಳೇದಗುಡ್ಡ ಪುರಸಭೆಗೆ ಬಾಗಲಕೋಟೆ ಲೋಕಾಯುಕ್ತರು ದಿಢೀರ್ ಭೇಟಿ ನೀಡಿ, ಪುರಸಭೆಯ ವಿವಿಧ ಕೆಲಸಗಳ ಕಡತ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಪುರಸಭೆಯ ಇ-ಖಾತಾ, ಲಾಗ್ ಬುಕ್, ಕಟ್ಟಡ ಪರವಾನಗಿ, ಅಂಗಡಿಗಳ ಲೈಸೆನ್ಸ್ ದಾಖಲೆ ಸೇರಿದಂತೆ ಅನೇಕ ಕೆಲಸಗಳ ಕುರಿತಾಗಿ ಮಾಹಿತಿ ಪಡೆದುಕೊಂಡರು. ಕೆಲವು ಮಾಹಿತಿಗಳ ಬಗ್ಗೆ ಸಿಬ್ಬಂದಿಯಿಂದ ಕೇಳಿ ತಿಳಿದುಕೊಂಡರು.