ಹಾವು ಕಡಿತದ ಬಗ್ಗೆ ಜನ ಜಾಗೃತಿ ಅತ್ಯವಶ್ಯ: ಡಾ.ದಯಾನಂದ ಕರೆಯನ್ನವರಹಾವು ಕಡಿತ ಒಂದು ಜಾಗತಿಕ ಸಮಸ್ಯೆಯಾಗಿದೆ. ಇದರಿಂದ ಸಾವು ನೋವುಗಳಾಗುತ್ತಿದ್ದು, ಸಾವಿನ ಪ್ರಮಾಣ ಪ್ರತಿವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ. ಆದ್ದರಿಂದ ಸೆ.19ರಂದು ಜನರಲ್ಲಿ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಹಾವು ಕಡಿತದ ಜಾಗೃತಿ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆಂದು ಬಾಗಲಕೋಟೆ ಜಿಲ್ಲಾಸಮೀಕ್ಷಣಾಧಿಕಾರಿಗಳಾದ ಡಾ.ದಯಾನಂದ ಕರೆಯನ್ನವರ ಹೇಳಿದರು.