ಕಾಂಗ್ರೆಸ್ ಸರ್ಕಾರ ಯಾವತ್ತಿಗೂ ರೈತಪರ: ಸಚಿವ ಆರ್.ಬಿ. ತಿಮ್ಮಾಪೂರಕಾಂಗ್ರೆಸ್ ಸರ್ಕಾರ ಯಾವತ್ತೂ ರೈತಪರವಾಗಿದೆ. ರೈತರ ಸಮಸ್ಯೆಗಳನ್ನು ಆಲಿಸುತ್ತಾ, ಸಮಸ್ಯೆಗಳಿಗೆ ಸ್ಪಂದಿಸುತ್ತಾ, ರೈತರ ಬೇಕು, ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ. ನಾನೂ ಕೂಡಾ ಓರ್ವ ರೈತನ ಮಗನಾಗಿದ್ದು, ರೈತರ ಸಮಸ್ಯೆಗಳೇನು? ಅವರ ನೋವು ನಲಿವುಗಳೇನು ಎಂಬುವುದು ನನಗೆ ಪೂರ್ಣ ಗೊತ್ತಿದೆ. ಹೀಗಾಗಿ ನಾನು ರೈತಪರವಾಗಿದ್ದೇನೆ, ರೈತರ ಬೇಕು-ಬೇಡಿಕೆಗಳ ಈಡೇರಿಸು ವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಯೇ ಮಾಡುತ್ತೇನೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.