ಬಾಲ್ಯವಿವಾಹ ತಡೆಗೆ ಬೇಕು ನಾಗರಿಕರ ಬೆಂಬಲ: ವಿನೋದ ಪತ್ತಾರತೇರದಾಳ: ಬಾಲ್ಯ ವಿವಾಹ ನಾಗರಿಕ ಪ್ರಪಂಚಕ್ಕೆ ಅಂಟಿದ ಭಯಂಕರ ಪಿಡುಗಾಗಿದ್ದು, ಭಾರತದಲ್ಲಿ ಹೆಚ್ಚು ಆಚರಣೆಯಲ್ಲಿದೆ. ಇದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮಗಳಾಗುತ್ತಿದ್ದು, ದೈಹಿಕ ಸಕ್ಷಮತೆಯ ಕೊರತೆಯ ಕಾರಣ ಸ್ತ್ರೀ ಮರಣವೂ ಹೆಚ್ಚುತ್ತದೆಂದು ವಕೀಲ ವಿನೋದ ಪತ್ತಾರ ಹೇಳಿದರು.