ಧಾರಾಕಾರ ಮಳೆಗೆ ಕೊಚ್ಚಿಹೋದ ಮೊಳಕೆಬುಧವಾರ ರಾತ್ರಿಯಿಡಿ ಜಿಲ್ಲೆಯ ವಿವಿಧೆಡೆ ಸುರಿದ ಧಾರಾಕಾರ ಮಳೆ ಹಲವಾರು ಆವಾಂತರ ಸೃಷ್ಟಿಸಿದೆ. ರಭಸದ ಮಳೆಗೆ ಹೊಲಗದ್ದೆಗಳಲ್ಲಿ ನೀರು ತುಂಬಿಕೊಂಡು ಎತ್ತ ನೋಡಿದರತ್ತ ನೀರೇ ಕಂಡುಬರುತ್ತಿತ್ತು. ತಾಲೂಕಿನ ಸಿಕ್ಕೇರಿ ಗ್ರಾಮದಲ್ಲಿ ಸುರಿದ ಮಳೆಯಿಂದ ರೈತರು ಬಿತ್ತನೆ ಮಾಡಿದ್ದ ಜೋಳ, ಗೋವಿನ ಜೋಳ, ಈರುಳ್ಳಿ ಮೊಳಕೆಗಳು ಕೊಚ್ಚಿ ಹೋಗಿವೆ.