ಆರೆಸ್ಸೆಸ್ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರಸ್ಪಷ್ಟ ಧ್ಯೇಯ ಮತ್ತು ಸಿದ್ಧಾಂತಕ್ಕೆ ಒಳಪಟ್ಟ ಸಂಘಟನೆ ಆರ್‌ಎಸ್‌ಎಸ್ ಪ್ರಸ್ತುತ ದೇಶದಲ್ಲಿ 73,000ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. 35 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಘ ದಿನೇ ದಿನೆ ಬೆಳೆಯುತ್ತಿರುವುದನ್ನು ಸಹಿಸದ ಕೆಲವು ಶಕ್ತಿ, ಸಂಘಟನೆಗಳು ಆರ್‌ಎಸ್ಎಸ್ ಬಗ್ಗೆ ನಿರಂತರವಾಗಿ ದೂಷಣೆ ಮಾಡುತ್ತಿವೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ಆನೆಯಂತೆ ನಮ್ಮ ಸಂಘಟನೆ ಮುಂದೆ ಸಾಗುತ್ತಿದೆ ಎಂದು ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ ಹೇಳಿದರು.