ಮೀಸಲಾತಿ ವಿಳಂಬ; ನಗರಸಭೆ ಸದಸ್ಯರ ರೋದನನಗರಸಭೆ ಚುನಾವಣೆ ನಡೆದಿದ್ದು ಆಯ್ತು, ಅಭ್ಯರ್ಥಿಗಳು ಗೆದ್ದಿದ್ದು ಆಯ್ತು. ಆದರೆ, ಯಾವುದೇ ಅಧಿಕಾರ ಸಿಗದೇ ನಗರಸಭೆಯಲ್ಲಿ ಕೇವಲ ನಾಮಕಾವಾಸ್ತೇ ಕೆಲಸ ಮಾಡುವಂತಾಗಿದೆ ಗೆದ್ದವರ ಪರಿಸ್ಥಿತಿ. ಕಾರಣ, ಮೊದಲ ಬಾರಿಗೆ ಜನಪ್ರತಿನಿಧಿಗಳಾಗಿ ವರ್ಷ ಕಳೆದರೂ ಹುದ್ದೆ ಅಲಂಕರಿಸಲಾಗುತ್ತಿಲ್ಲ. ಅತಂತ್ರ ಪರಿಸ್ಥಿತಿ ಎದುರಿಸುತ್ತಿರುವುದು ರಬಕವಿ-ಬನಹಟ್ಟಿ ನಗರಸಭೆ ಸದಸ್ಯರರು. ಗೆದ್ದರೂ ಅಧಿಕಾರ ಇಲ್ಲದೆ ಹಲ್ಲು ಕಿತ್ತ ಹಾವಿನಂತಾಗಿದೆ ಇವರ ಪರಿಸ್ಥಿತಿ.