ಕೋಟ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿ ಬರ ಅಧ್ಯಯನಕುಂದಾಣ: ರಾಜ್ಯದಲ್ಲಿ 39 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಬರದಿಂದಾಗಿ ಒಣಗಿದೆ. ಇದರಿಂದಾಗಿ 33 ಸಾವಿರ ಕೋಟಿ ನಷ್ಟವಾಗಿದ್ದು, ಬಿಜೆಪಿ ಬರ ಅಧ್ಯಯನ ಆರಂಭಿಸಿದ ಬಳಿಕ ಜನರ ಕಣ್ಣಿಗೆ ಮಂಕು ಬಳಿಯಲು ಕೇವಲ 324 ಕೋಟಿ ಹಣ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿದರು.