ಮೇಲ್ಮನೆಗೆ ಆರತಿ ಕೃಷ್ಣ ಸೇರಿ 4 ಎಂಎಲ್ಸಿ ನಾಮನಿರ್ದೇಶನರಾಜ್ಯದಲ್ಲಿ ಖಾಲಿ ಇರುವ ನಾಲ್ಕು ವಿಧಾನಪರಿಷತ್ ನಾಮನಿರ್ದೇಶಿತ ಸ್ಥಾನಗಳಿಗೆ ಏಳು ತಿಂಗಳ ಹಗ್ಗ ಜಗ್ಗಾಟದ ಬಳಿಕ ಕೊನೆಗೂ ನೇಮಕಾತಿ ಆದೇಶ ಹೊರಬಿದ್ದಿದ್ದು, ಡಾ.ಆರತಿ ಕೃಷ್ಣ, ಎಫ್.ಎಚ್.ಜಕ್ಕಪ್ಪನವರ್, ಕೆ.ಶಿವಕುಮಾರ್ ಹಾಗೂ ರಮೇಶ್ ಬಾಬು ಪರಿಷತ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.