ಗಣಕಯಂತ್ರ ಶಿಕ್ಷಕರ ನಿಯೋಜನೆಗೆ ಲಕ್ಷಾಂತರ ರು. ಸುಲಿಗೆ !ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಂದ ಅನುಮತಿ ಪಡೆದ ಬಳಿಕ ನಿಯಮ ಮೀರಿ ಅಟೆಂಡರ್ ನೇಮಕ ಮತ್ತು ಗಣಕಯಂತ್ರ, ಯೋಗ ತರಬೇತಿಗೆ ಅತಿಥಿ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಲಕ್ಷಾಂತರ ರು. ಪಡೆದು ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಕನ್ನಡಪ್ರಭ ವರದಿ ಮಾಡಿದ್ದರಿಂದ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಈ ಹಗರಣ ತನಿಖೆಗಾಗಿ ಮೂವರು ಅಧಿಕಾರಿಗಳನ್ನು ನೇಮಿಸಿದೆ.