ಕೃಷಿಯಲ್ಲಿ ರಾಸಾಯನಿಕ ಕ್ರಮ ಕೊನೆ ಅಸ್ತ್ರವಾಗಬೇಕು: ಡಾ.ಪ್ರಕಾಶ್'ಕೃಷಿಯಲ್ಲಿ ಕಂಡು ಬರುವ ಕಳೆ, ಕೀಟ ಮತ್ತು ರೋಗಗಳ ಸಮಸ್ಯೆಗಳಿಗೆಲ್ಲ ರಾಸಾಯನಿಕ ಕ್ರಮ ಒಂದೇ ಅಸ್ತ್ರವಲ್ಲ, ಹೇಳಬೇಕೆಂದರೆ ಅದು ಕೊನೆಯ ಅಸ್ತ್ರವಾಗಬೇಕು' ಎಂದು ಬೇಸಾಯ ಶಾಸ್ತ್ರಜ್ಞ ಡಾ.ಪಿ. ಪ್ರಕಾಶ್ ಹೇಳಿದ್ದಾರೆ. ಚಾಮರಾಜನಗರದಲ್ಲಿ 'ಸೂರ್ಯಕಾಂತಿ ಬೆಳೆ ವಿಚಾರ ಸಂಕಿರಣ' ಕಾರ್ಯಕ್ರಮದಲ್ಲಿ ಮಾತನಾಡಿದರು.