ವಿಜೃಂಭಣೆಯಿಂದ ಜರುಗಿದ ಗಂಗಾಧರೇಶ್ವರ ರಥೋತ್ಸವತಾಲೂಕಿನ ಬಿಳಿಗಿರಿರಂಗನಬೆಟ್ಟದ ಉದ್ಭವಮೂರ್ತಿ ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ನಡೆಯಿತು. ಬೆಳಗ್ಗೆಯಿಂದಲೆ ದೇವಾಲಯದಲ್ಲಿ ಸ್ವಯಂ ಉದ್ಭವಮೂರ್ತಿ ಗಂಗಾಧರೇಶ್ವರಸ್ವಾಮಿಗೆ ವಿಶೇಷ ಪೂಜೆ ಮತ್ತು ಅಭಿಷೇಕ, ಅರ್ಚನೆ ಸೇರಿದಂತೆ ದೇವತಾ ಕಾರ್ಯಗಳು ಜರುಗಿದವು.