40 ಕಿಮೀ ಬರಿಗಾಲಲ್ಲಿ ಕಪಿಲಾಜಲ ತಂದು ಶಿವರಾತ್ರಿ ಆಚರಣೆಶಿವರಾತ್ರಿ ಎಲ್ಲೆಡೆ ಶಿವನಿಗೆ ನಾನಾ ರೀತಿಯ ಅಭಿಷೇಕ, ಪೂಜೆ ಪುನಸ್ಕಾರಗಳು ನಡೆಯುತ್ತವೆ. ಅಂತೆಯೇ 40 ಕಿಲೋ ಮೀಟರ್ ದೂರದಿಂದ ಬರಿಗಾಲಲ್ಲಿ ನಡಯುವ ಮೂಲಕ ಕಪಿಲಾ ಜಲವನ್ನು ಹೊತ್ತು ತಂದು ಶಿವಲಿಂಗಕ್ಕೆ ಅಭಿಷೇಕ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಶಿವರಾತ್ರಿ ಆಚರಿಸುವ ಪದ್ಧತಿ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದುಕೊಂಡು ಬಂದಿದೆ.