ದ್ವೇಷ ಮರೆತು ಗ್ರಾಮದ ಜನರು ಒಂದಾಗಿ ಬಾಳಿ: ಶಾಸಕ ಪ್ರದೀಪ್ ಈಶ್ವರ್ಹಿಂದೆ ಗ್ರಾಮಗಳಲ್ಲಿ ಯಾವುದೇ ಕೆಲಸವನ್ನಾದರೂ ಎಲ್ಲರೂ ಒಗ್ಗೂಡಿ ಮಾಡುತ್ತಿದ್ದರು. ರಾಜಕಾರಣ ಬಂದ ನಂತರ ಕೆಲ ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಮನೆ, ಮನಗಳಲ್ಲಿ ಪರಸ್ಪರ ದ್ವೇಷದ ವಿಷಬೀಜ ಬಿತ್ತಿದ್ದು, ಇದರಿಂದ ಅಣ್ಣ - ತಮ್ಮಂದಿರು,ಅಕ್ಕ - ತಂಗಿಯರು, ತಂದೆ - ಮಕ್ಕಳು ಅಲ್ಲದೇ ಸತಿ - ಪತಿಗಳಾದವರೂ ಬೇರೆಯಾಗುತ್ತಿದ್ದಾರೆ.