ಮೊಟ್ಟೆ ಬೆಲೆ ವ್ಯತ್ಯಾಸ ಸರಿಪಡಿಸಲು ಒತ್ತಾಯನರಸಿಂಹರಾಜಪುರ, ಪಿ.ಎಂ.ಪೋಷಣ್ ಅಭಿಯಾನ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರವಾಗಿ ಮಕ್ಕಳಿಗೆ ನೀಡುತ್ತಿರುವ ಮೊಟ್ಟೆ ಬೆಲೆಗೂ, ಮಾರುಕಟ್ಟೆ ಯಲ್ಲಿರುವ ಮೊಟ್ಟೆ ಬೆಲೆಗೂ ವ್ಯತ್ಯಾಸವಿದ್ದು ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲು ಶಿಕ್ಷಕರಿಗೆ ಕಷ್ಟವಾಗುತ್ತಿದೆ ಇದನ್ನು ಸರ್ಕಾರ ಸರಿಪಡಿಸಬೇಕು ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಒತ್ತಾಯಿಸಿದರು.