ಮಳೆಯ ಆರ್ಭಟ: ಮಂಗಳೂರು ಶೃಂಗೇರಿ ಸಂಪರ್ಕ ಕಡಿತಶೃಂಗೇರಿ, ತಾಲೂಕಿನಲ್ಲಿ ಮತ್ತೆ ಮಳೆ ರುದ್ರ ನರ್ತನ ಮುಂದುವರೆದಿದ್ದು, ತುಂಗಾ ನದಿ ಉಗಮ ಸ್ಥಳವಾದ ಪಶ್ಟಿಮ ಘಟ್ಟಗಳ ತಪ್ಪಲು ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗುರುವಾರ ಬೆಳಿಗ್ಗೆಯಿಂದ ಸುರಿದ ಭಾರೀ ಮಳೆಗೆ ತುಂಗಾ ನದಿಯಲ್ಲಿ ಉಂಟಾದ ಪ್ರವಾಹದಿಂದ ಮಂಗಳೂರು ಶೃಂಗೇರಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರು ಬಳಿ ರಸ್ತೆಗೆ ನೀರು ನುಗ್ಗಿ ಸಂಜೆಯಿಂದ ಮಂಗಳೂರು ಶೃಂಗೇರಿ ಸಂಪರ್ಕ ಕಡಿತಗೊಂಡಿತು.