ಎಲ್ಲಾ ಜೀವಿಗಳ ಆವಾಸಸ್ಥಾನ ರಕ್ಷಿಸುವುದು ನಮ್ಮ ಹೊಣೆ: ನಂದೀಶ್ಕೊಪ್ಪ, ಪ್ರತೀ ವರ್ಷ ಅಕ್ಟೋಬರ್ ತಿಂಗಳ ಮೊದಲ ಸೋಮವಾರವನ್ನು ವಿಶ್ವ ಆವಾಸಸ್ಥಾನ ದಿನವನ್ನಾಗಿ ವಿಶ್ವಸಂಸ್ಥೆ ಘೋಷಿಸಿದೆ. ಮನುಷ್ಯನ ವಾಸ ಪ್ರದೇಶವಾದ ನಗರ, ಪಟ್ಟಣ, ಹಳ್ಳಿಗಳ ಅಭಿವೃದ್ಧಿಯೊಂದಿಗೆ ವೈವಿಧ್ಯವಾದ ಸಸ್ಯ ಹಾಗೂ ಜೀವ ವೈವಿಧ್ಯತೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ಬಗೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ೧೯೮೫ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್ ಹೇಳಿದರು.