ಮಳೆಯಲ್ಲೂ ಶೃಂಗೇರಿಗೆ ಭಕ್ತರ ದಂಡು. ಶೃಂಗೇರಿಯಲ್ಲಿನ ನವರಾತ್ರಿ ಉತ್ಸವ ದಿನದಿಂದ ದಿನಕ್ಕೆ ಮೆರಗು ಪಡೆದುಕೊಳ್ಳುತ್ತಿದ್ದು ಭಕ್ತರ ದಂಡೇ ಶೃಂಗೇರಿಗೆ ಹರಿದು ಬರುತ್ತಿದೆ. ಒಂದೆಡೆ ಗುಡುಗು ಮಳೆಯ ಆರ್ಭಟ, ಇನ್ನೊಂದೆಡೆ ಜನಸಾಗರ. ಶ್ರೀಮಠದ ಆವರಣ, ಗಾಂಧಿ ಮೈದಾನ, ಶಾರದಾಂಬಾ ದೇವಾಲಯ, ನರಸಿಂಹವನ , ಭೋಜನಾ ಶಾಲೆ, ಬಸ್ ನಿಲ್ದಾಣ, ಭಾರತೀ ಬೀದಿ ಎಲ್ಲೆಡೆ ಜನಜಂಗುಳಿ ಕಂಡು ಬರುತ್ತಿದೆ.