ಮಲೆನಾಡಲ್ಲಿ ಚುರುಕುಗೊಂಡ ಮುಂಗಾರು: ನದಿಗಳಿಗೆ ಜೀವಕಳೆಚಿಕ್ಕಮಗಳೂರು, ಪಶ್ಚಿಮಘಟ್ಟದ ತಪ್ಪಲಲ್ಲಿರುವ ಚಿಕ್ಕಮಗಳೂರು ಪಂಚನದಿಗಳ ತವರೂರು. ಮಲೆನಾಡು ಮತ್ತು ಮಳೆಗೂ ಬಿಡಿಸಲಾರದ ನಂಟಿದೆ. ಇಲ್ಲಿನ ಬೆಟ್ಟಗಳು, ಕಾಡು, ನದಿ, ಹಳ್ಳ, ಝರಿಗಳಿಗೆ ಜೀವ ಕಳೆ ಬರಬೇಕಾದರೆ ಮಳೆ ಸಿಂಚನವಾಗಲೇಬೇಕು. ಅದಕ್ಕಾಗಿ ಇವುಗಳು ಹಾತೋರೆಯುತ್ತವೆ. ಚಳಿಗಾಲದಲ್ಲಿ ಮುದುಡಿದ ಪ್ರಕೃತಿಯ ಮಡಿಲಿಗೆ ಮಳೆ ಹಾನಿಗಳು ಸ್ಪರ್ಶಿಸುತ್ತಿದ್ದಂತೆ ಬೆಟ್ಟಗಳು ಹಸಿರಾಗುತ್ತವೆ. ಗಿಡ ಮರಗಳು ಚಿಗುರುತ್ತವೆ, ನದಿಗಳ ಒಡಲು ಭರ್ತಿಯಾಗುತ್ತದೆ. ಕಣ್ಮರೆಯಾಗಿದ್ದ ಝರಿಗಳು ಪುನರ್ ಜನ್ಮ ಪಡೆಯುತ್ತವೆ. ಸ್ವರೂಪ ಕಳೆದುಕೊಂಡಿದ್ದ ಹಳ್ಳಗಳು ಕಣ್ಣಿಗೆ ಗೋಚರಿಸುತ್ತವೆ.