ಕುಡಿವ ನೀರಿಗೆ ಕನ್ನ: ಪುರಸಭೆಯಿಂದ ದೂರು ದಾಖಲುಕಡೂರು- ಬೀರೂರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಭದ್ರಾ ಕುಡಿಯುವ ನೀರು ಯೋಜನೆ ಪೈಪ್ ಲೈನ್ ಗಳಿಗೆ ವಾಲ್ವ್ ಹಾಕಿ ನೀರು ಸೋರಿಕೆಯಾಗುವಂತೆ ಮಾಡಿ, ಅದನ್ನು ಅಡಕೆ ತೋಟಗಳಿಗೆ ಅನಧಿಕೃತ ವಾಗಿ ಹಾಯಿಸಿಕೊಳ್ಳುತ್ತಿರುವವರ ವಿರುದ್ಧ ಪುರಸಭೆಯಿಂದ ಮಂಗಳವಾರ ದೂರು ನೀಡಲಾಗಿದೆ.