ಹೆಗ್ಡೆಗೆ ಟಿಕೆಟ್ ಖಾತರಿಯಾಗುತ್ತಿದ್ದಂತೆ ಶೋಭಾ ಕ್ಷೇತ್ರ ಬಿಟ್ಟು ಪಲಾಯನಎರಡು ಬಾರಿ ಸಂಸದೆಯಾಗಿದ್ದು, ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ. ಈ ಬಾರಿ ಕಾಂಗ್ರೇಸ್ ನಿಂದ ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ಖಾತರಿಯಾಗುತ್ತಿದ್ದಂತೆ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರ ಬಿಟ್ಟು ಬೇರೆ ಕಡೆಗೆ ಪಲಾಯನ ಮಾಡಿದ್ದಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನಕೊಡಿಗೆ ನಟರಾಜ್ ಲೇವಡಿ ಮಾಡಿದ್ದಾರೆ.