ಭಾಷೆ ಬಳಕೆಯಿಂದ ಮಾತ್ರ ಶ್ರೀಮಂತವಾಗುವುದು: ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್ತರೀಕೆರೆ, ಭಾಷೆಯನ್ನು ಬಳಸಿದಾಗ ಮಾತ್ರ ಶ್ರೀಮಂತವಾಗುತ್ತದೆ. ಹೃದಯ ಶ್ರೀಮಂತಿಕೆಯಿಂದ ಮಾತ್ರ ಈ ಕೆಲಸ ಸಾಧ್ಯ, ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಬೇಕು. ಮುಖ್ಯವಾಗಿ ಕನ್ನಡ ಭಾಷೆ ಮನೆ ಮತ್ತು ಅನ್ನ ಕೊಡುವ ಭಾಷೆಯಾಗಬೇಕು ಎಂದು ಸಮ್ಮೇಳನಾಧ್ಯಕ್ಷ ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಅಭಿಪ್ರಾಯಪಟ್ಟರು.