ಸಂವಿಧಾನದಿಂದ ದೇಶದೆಲ್ಲೆಡೆ ಎಲ್ಲರಿಗೂ ಸಮಾನ ಹಕ್ಕು: ಟಿ.ಡಿ.ರಾಜೇಗೌಡಡಾ.ಬಿ.ಆರ್. ಅಂಬೇಡ್ಕರ್ರವರ ಸಂವಿಧಾನದಿಂದ ದೇಶದೆಲ್ಲೆಡೆ ಎಲ್ಲರಿಗೂ ಸಮಾನ ಹಕ್ಕುಗಳಿದ್ದು, ಜನ ಸಾಮಾನ್ಯರಿಗೆ, ಜನಪ್ರತಿನಿಧಿಗಳನ್ನು ಚುನಾಯಿಸುವ ಮತದಾನದ ಹಕ್ಕು, ಸಾಮಾನ್ಯರೂ ಕೂಡ ಜನಪ್ರತಿನಿಧಿಗಳಾಗುವ ಅವಕಾಶ ಸಂವಿಧಾನ ಕಲ್ಪಿಸಿಕೊಟ್ಟಿದೆ ಎಂದು ಶಾಸಕ, ನವೀಕರಿಸಬಹುದಾದ ಇಂಧನ ಪ್ರಾಧಿಕಾರ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.