ಶೃಂಗೇರಿ ಗುಬ್ಬಗೋಡು ಶಿರೂರು ಹೊನ್ನವಳ್ಳಿ ಸಂಪರ್ಕ ರಸ್ತೆಯಲ್ಲಿ ಹೊಂಡಗಳದ್ದೇ ಸಾಮ್ರಾಜ್ಯ.ರಸ್ತೆಯಲ್ಲಿ ರಸ್ತೆಗಿಂತ ಹೊಂಡ, ಗುಂಡಿಗಳೇ ಜಾಸ್ತಿ, ಜಲ್ಲಿಕಲ್ಲುಗಳು ಮೇಲೆದ್ದಿವೆ. ಮಳೆಗಾಲದಲ್ಲಿ ಹೊಂಡಗುಂಡಿಗಳಲ್ಲಿ ನೀರು ನಿಂತು ಕೆರೆಯಂತೆ, ಮಳೆ ನೀರೆಲ್ಲ ರಸ್ತೆಯ ಮೇಲೆಯೇ ಹರಿಯುತ್ತಾ ರಸ್ತೆ ಕಾಲುವೆ ಎರಡು ಒಂದೇ ರೀತಿಯಲ್ಲಿ ಕಾಣುತ್ತದೆ. ಸುಮಾರು ಎರಡು ದಶಕ ಕಳೆದರೂ ಈ ರಸ್ತೆಗೆ ಡಾಂಬರೀಕರಣ ಭಾಗ್ಯ ಇನ್ನೂ ಸಿಕ್ಕಿಲ್ಲ.