ಕರಡಿ ದಾಳಿ: ನಷ್ಟ ಪರಿಹಾರಕ್ಕೆ ರೈತ ದಯಾನಂದ ಮನವಿತಾಲೂಕಿನ ಕಸಬಾ ಹೋಬಳಿ ಶಿಡುಕನಹಳ್ಳಿ ಸರ್ವೆ ನಂ. 29 /2ರಲ್ಲಿ ಎರಡು ಎಕರೆ ಅಡಕೆ ತೋಟದಲ್ಲಿ ಮೂರು ವರ್ಷಗಳಿಂದ ಶ್ರಮಪಟ್ಟು ಜೇನುಕೃಷಿ ಮಾಡಿದ್ದು ಜ.23 ರಂದು ರಾತ್ರಿ ತೋಟಕ್ಕೆ ನುಗ್ಗಿದ ಕರಡಿ 20 ಜೇನು ಪೆಟ್ಟಿಗಳ ಪೈಕಿ, 13 ಜೇನು ಪೆಟ್ಟಿಗೆಗಳನ್ನು ಬೀಳಿಸಿ ಶೇಖರಣೆಯಾಗಿದ್ದ ಜೇನುತುಪ್ಪ ಕುಡಿದು ಜೇನುಪೆಟ್ಟಿಗೆಗಳನ್ನು ಹಾಳು ಮಾಡಿದೆ ಎಂದು ರೈತ ಎಚ್.ಒ. ದಯಾನಂದ ತಿಳಿಸಿದ್ದಾರೆ.