ಪುರಸಭೆಗೆ ರಾಷ್ಟ್ರೀಯ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿಯ ಗರಿಹೊಸದುರ್ಗ ಪಟ್ಟಣದಲ್ಲಿ ಕಸ ವಿಲೇವಾರಿ, ಶೌಚಾಲಯ ಬಳಕೆ, ಪಟ್ಟಣದ ಸ್ವಚ್ಛತೆ, ತ್ಯಾಜ್ಯ ಸಂಸ್ಕರಣೆ ಕುರಿತಂತೆ ಕೇಂದ್ರ ಸರ್ಕಾರ ನಡೆಸಿದ ರಾಷ್ಟ್ರೀಯ ಮಟ್ಟದ ಮೌಲ್ಯಮಾಪನದಲ್ಲಿ ಹೊಸದುರ್ಗ ಪಟ್ಟಣಕ್ಕೆ ಸ್ವಚ್ಛ ಸರ್ವೇಕ್ಷಣಾ 2023 ಪ್ರಶಸ್ತಿ ಲಭಿಸಿದೆ. ಪುರಸಭೆ 4ನೇ ಬಾರಿಗೆ ಈ ಗೌರವ ಮುಡಿಗೇರಿಸಿಕೊಂಡಿದೆ.