ನಾಯಕನಹಟ್ಟಿಯಲ್ಲಿ ರಾಜ್ಯ ಹೆದ್ದಾರಿ ನುಂಗಿದ ಗೂಡಂಗಡಿಗಳು!ಜಿಲ್ಲೆಯ ಪ್ರಮುಖ ಯಾತ್ರಾ ಹಾಗೂ ಪುಣ್ಯ ತಾಣ ಖ್ಯಾತಿ ನಾಯಕನಹಟ್ಟಿ ಪಟ್ಟಣದಲ್ಲಿ ಬೀದಿ, ಬಡಾವಣೆ ಸಂಪರ್ಕ ರಸ್ತೆಗಳು ಒತ್ತುವರಿಯಾಗಿವೆ. ಈಚೆಗೆ ಪಟ್ಟಣದ ಪ್ರಮುಖ ಬೈಪಾಸ್ ರಾಜ್ಯ ಹೆದ್ದಾರಿಯಲ್ಲೂ ಕೂಡ ಭಾರಿ ಪ್ರಮಾಣದಲ್ಲಿ ಗೂಡಂಗಡಿಗಳು ಅಕ್ರಮವಾಗಿ ತಲೆಎತ್ತಿದ್ದು, ಕಿರಿದಾದ ರಸ್ತೆಗಳಿಂದಾಗಿ ಜನರ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.