ಮುರುಘಾಶ್ರೀ ನಡೆಗೆ ವೀರಶೈವ ಮುಖಂಡರ ಆಕ್ರೋಶ ಚಿತ್ರದುರ್ಗದ ವೀರಶೈವ ಲಿಂಗಾಯಿತ ಸಮಾಜಕ್ಕೆ ನೂತನ ಪದಾದಿಕಾರಿಗಳ ನೇಮಕವು ವಿವಾದ ಸೃಷ್ಟಿಸಿದ್ದು, ಶಿವಮೂರ್ತಿ ಮುರುಘಾ ಶರಣರ ಮೇಲೆ ಕೆಲ ವೀರಶೈವ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಹಕಾರ ಸಂಘಗಳ ನೋಂದಣಿ ಇಲಾಖೆಯ ಉಪನೋಂದಣಾಧಿಕಾರಿಗಳಿಗೆ ದೂರು ನೀಡಿ, ಯಾವುದೇ ಕಾರಣದಿಂದ ಪಟ್ಟಿಗೆ ಅನುಮೋದನೆ ನೀಡಬಾರದೆಂದು ಮನವಿ ಮಾಡಿದ್ದಾರೆ.