ಹೊಸ ದೇವರಹೊನ್ನಾಳಿ ಬಳಿ ಕರಡಿ: ಗ್ರಾಮಸ್ಥರ ಆತಂಕಕೆಲವು ದಿನಗಳಿಂದ ಹೊನ್ನಾಳಿ ತಾಲೂಕು ಹೊಸ ದೇವರಹೊನ್ನಾಳಿ ಗ್ರಾಮ ವ್ಯಾಪ್ತಿಯ ತೋಟ, ಜಮೀನುಗಳಲ್ಲಿ ಕರಡಿ ತಿರುಗಾಡುತ್ತಿದ್ದು, ಬೆಳೆಗಳನ್ನು ಬೆಳೆದ ರೈತರು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭೀಕರ ಬಿಸಿಲು, ಬರಗಾಲದ ಪರಿಸ್ಥಿತಿಯಿಂದ ಆಹಾರ, ನೀರು ಅರಸಿ ಕಾಡು ಪ್ರಾಣಿಗಳು ಗ್ರಾಮಗಳ ಸಮೀಪಕ್ಕೆ ಬರುತ್ತಿವೆ. ಚನ್ನಗಿರಿ ತಾಲೂಕು ದಾಗಿನಕಟ್ಟೆ ಗುಡ್ಡಗಾಡಿನಿಂದ ಹೊನ್ನಾಳಿ ತಾಲೂಕಿನ ಗ್ರಾಮಗಳ ಜಮೀನು, ಅಡಕೆ ತೋಟಗಳ ಮೂಲಕ ಕರಡಿಗಳು ಆಗಮಿಸಿವೆ.