ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಗಮನಹರಿಸಬೇಕು: ಡಾ.ಚಂದ್ರಶೇಖರಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿರುವ ಸಂಸ್ಕೃತಿಯನ್ನು ಕೂಡಿಸಲು ಎತ್ನಿಕ್ ಡೇ ಕಾರ್ಯಕ್ರಮ ಆಚರಣೆ ಮಾಡಲಾಗುತ್ತದೆ. ಎತ್ನಿಕ್ ಡೇ ಎಂದರೇ ಕಾರು, ಬೈಕುಗಳಲ್ಲಿ ಬರುವುದಲ್ಲ. ಹಳ್ಳಿ ಸೊಗಡಿನ ಉಡುಪು ಧರಿಸಿ, ಎತ್ತಿನ ಬಡ್ಡಿ, ಟ್ರ್ಯಾಕ್ಟರ್‌ಗಳಲ್ಲಿ ಬಂದು ಮೆರುಗು ತುಂಬಬೇಕು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಡಾ. ಬಿ.ಪಿ. ಚಂದ್ರಶೇಖರ ಹೇಳಿದ್ದಾರೆ.