ಮೂಲಸೌಕರ್ಯ ದಕ್ಕದೇ ಆದಿವಾಸಿಗಳ ಗೋಳು ಅರಣ್ಯರೋದನಸ್ವಾತಂತ್ರ್ಯಪೂರ್ವದ ಬ್ರಿಟಿಷರ ಆಳ್ವಿಕೆ ಕಾನೂನುಗಳ ಆಧಾರದಲ್ಲೇ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸ ಇಂದಿಗೂ ಮುಂದುವರಿದಿದೆ. ಇದರಿಂದಾಗಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಬುಡಕಟ್ಟು ಜನರು, ಆದಿವಾಸಿ ಜನರ ಅಭಿವೃದ್ಧಿ ಆಗುತ್ತಿಲ್ಲ, ಮೂಲಸೌಕರ್ಯಗಳೂ ದಕ್ಕುತ್ತಿಲ್ಲ ಎಂದು ವಿಧಾನ ಪರಿಷತ್ತು ಸದಸ್ಯ ಶಾಂತಾರಾಮ್ ಸಿದ್ಧಿ ದಾವಣಗೆರೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.