ಚುನಾವಣೆಗಳಲ್ಲಿ ಜನಪರ ಹೋರಾಟಗಾರರ ಆಯ್ಕೆ ಮುಖ್ಯಬಡವರು, ನಿರುದ್ಯೋಗಿಗಳು, ಕಾರ್ಮಿಕರು, ನೌಕರರ ವರ್ಗಗಳನ್ನು ಯಾರು ಗೌರವಿಸುತ್ತಾರೋ, ಅವರ ಪರ ಹೋರಾಟ ಮಾಡುತ್ತಾರೆಯೋ ಅಂತಹವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು. ಆಗ ಮಾತ್ರ ಈ ವರ್ಗಗಳಿಗೆ ನ್ಯಾಯ ದೊರಕುತ್ತದೆ ಎಂದು ವಿಧಾನ ಪರಿಷತ್ತು ನೈರುತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ ಹೊನ್ನಾಳಿಯಲ್ಲಿ ಹೇಳಿದ್ದಾರೆ.