ಮಹಾನುಭಾವಿ, ಸಮಾನತೆ ಗಾರುಡಿಗ ಸಿದ್ದರಾಮೇಶ್ವರ ಶ್ರೀಶ್ರೀ ಸಿದ್ದರಾಮೇಶ್ವರರ ವ್ಯಕ್ತಿತ್ವವು ಹಲವು ಮುಖಗಳಲ್ಲಿ ಅರಳಿದೆ. ಮಹಾನುಭಾವಿ, ಸಮಾಜ ಚಿಂತಕ, ಸಮಾಜ ಸುಧಾರಕ ಹಾಗೂ ಸಮಾನತೆಯ ಗಾರುಡಿಗನಾಗಿದ್ದಾರೆ. ಸರ್ವ ಜೀವದಯಾ ಪರನಾಗಿ, ವೀರ ವೈರಾಗ್ಯ ನಿಧಿಯಾಗಿ, ಜಂಗಮ ಜ್ಞಾನಿಯಾಗಿ, ಕರ್ಮಯೋಗಿಯಾಗಿ ತಮ್ಮ ಜನಾನುರಾಗಿ ಕಾರ್ಯಗಳಿಂದ ಜನಮಾನಸದಲ್ಲಿ ನೆಲೆಸಿದ್ದಾರೆ ಎಂದು ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನುಡಿದರು.