ಹೆಗಡೆ ನಗರ ಸಂತ್ರಸ್ತರಿಗೆ ಮೂಲ ಸೌಕರ್ಯ ಕಲ್ಪಿಸಿ: ಜಬೀನಾ ಖಾನಂಹೆಗಡೆ ನಗರದ ನಿರಾಶ್ರಿತರಿಗೆ ಮನೆ, ಅಂಗನವಾಡಿ, ಶಾಲೆ, ರಸ್ತೆ, ಸಾರಿಗೆ ವ್ಯವಸ್ಥೆ, ಶೌಚಾಲಯ, ಶುದ್ಧ ಕುಡಿಯುವ ನೀರು, ಆಸ್ಪತ್ರೆ, ಪಡಿತರ ಅಂಗಡಿ, ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಮೂಲ ಸೌಕರ್ಯ ಕಲ್ಪಿಸುವವರೆಗೂ ಸಂತ್ರಸ್ತ ಕುಟುಂಬಗಳಿಗೆ ಬಾಡಿಗೆ ಮನೆಯಲ್ಲಿರಲು ಪಾಲಿಕೆ, ಜಿಲ್ಲಾಡಳಿತ, ಸರ್ಕಾರದಿಂದಲೇ ಮನೆ ಬಾಡಿಗೆ ಹಣ ನೀಡಬೇಕು.