ಚುನಾವಣೆ ಮತ ಎಣಿಕೆ: ಜಿಲ್ಲಾ ಕೇಂದ್ರಕ್ಕೆ ದೌಡಾಯಿಸಿದ ಹೊನ್ನಾಳಿ ಜನಲೋಕಸಭಾ ಚುನಾವಣೆ ಮತ ಎಣಿಕೆ ಕಾರ್ಯ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ನಡೆದಿದ್ದರಿಂದ ತಾಲೂಕಿನ ಬಹುತೇಕ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ತಮ್ಮ ನಾಯಕರ ಫಲಿತಾಂಶ ತಿಳಿಯುವ ಕುತೂಹಲ ಕಣ್ತುಂಬಿಕೊಳ್ಳಲು ದಾವಣಗೆರೆ ನಗರಕ್ಕೆ ಆಗಮಿಸಿದ್ದರು. ಪರಿಣಾಮ ಮಂಗಳವಾರ ಇಡೀ ಹೊನ್ನಾಳಿ ಪಟ್ಟಣದಲ್ಲಿ ಜನ ಮತ್ತು ವಾಹನಗಳ ಸಂಚಾರ ದಟ್ಟಣೆ ಇಲ್ಲದೇ ರಸ್ತೆಗಳು, ಕಚೇರಿಗಳೆಲ್ಲ ಜನರಿಲ್ಲದೇ ಖಾಲಿಯಾಗಿದ್ದವು.