ಬಸವಣ್ಣ ಸಾರ್ವಕಾಲಿಕ ಕ್ರಾಂತಿ ಪುರುಷ : ಬಿ.ವಾಮದೇವಪ್ಪಮೇಲ್ವರ್ಗದ ಸಂಪ್ರದಾಯಿಗಳ ವಿರೋಧವನ್ನು ಲೆಕ್ಕಿಸದೇ 12 ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ತತ್ವಗಳು, ಚಿಂತನೆಗಳು, ವಚನಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ಆದರ್ಶಪ್ರಾಯವಾಗಿವೆ. ಜಾತಿರಹಿತವಾದ, ವರ್ಗರಹಿತವಾದ, ಮೌಡ್ಯರಹಿತವಾದ, ಶೋಷಣೆರಹಿತವಾದ ಸಮ ಸಮಾಜದ ನಿರ್ಮಾಣದ ಕನಸುಗಳನ್ನು ಹೊತ್ತಿದ್ದ ಬಸವಣ್ಣನವರು ವಚನಗಳ ಮೂಲಕ ವಿಶ್ವ ಸಾಂಸ್ಕೃತಿಕ ಲೋಕಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು.