ಉತ್ತರದ ಸಮಸ್ಯೆಗೆ ಧ್ವನಿಯಾಗುವುದೇ ಅಧಿವೇಶನ?ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಬರುವುದು ಕೊನೆಯ ಎರಡು ದಿನ. ಶಾಸಕರು, ಸಚಿವರು ಪೂರ್ಣ ಪ್ರಮಾಣದಲ್ಲಿ ಇರುವುದಿಲ್ಲ. ಸದನದಲ್ಲಿರುವ ಶಾಸಕರಿಗೂ ತಮ್ಮೂರಿಗೆ ಹೋಗುವ ಧಾವಂತ. ಹೀಗಾಗಿ ಕಾಟಾಚಾರಕ್ಕೆಂಬಂತೆ ಅಲ್ಲೊಬ್ಬರು, ಇಲ್ಲೊಬ್ಬರು ಶಾಸಕರು ಚರ್ಚೆ ನಡೆಸುತ್ತಾರೆ.