• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ದೀರ್ಘಾವಧಿ ಬಳಿಕ ಸಕಲೇಶಪುರ ಪುರಸಭೆ ಸಾಮಾನ್ಯ ಸಭೆ
ಸಕಲೇಶಪುರ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿರಾಜ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಕಾಡಪ್ಪ ಸ್ವಚ್ಚತೆ ಕಾರ್ಯಕೈಗೊಳ್ಳುವ ಪೌರಕಾರ್ಮಿಕರಿಗೆ ಮನೆಗಳಿಲ್ಲದ್ದಾಗಿದ್ದು, ಚಳಿಮಳೆಯಲ್ಲಿ ದಿನ ಕಳೆಯುವಂತಾಗಿದೆ. ಕೊಡಲೇ ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು. ಇದಕ್ಕೆ ಉತ್ತರಿಸಿದ ಶಾಸಕ ಸುಮಾರು ೭ ಕೋಟಿ ರು. ವೆಚ್ಚದಲ್ಲಿ ಪುರಸಭೆ ಪೌರಕಾರ್ಮಿಕರಿಗೆ ೬೨ ಮನೆಗಳನ್ನು ನಿರ್ಮಿಸಲಾಗುತ್ತಿದೆ ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ, ಈ ಬಗ್ಗೆ ಗಮನಹರಿಸಲಾಗುವುದು ಎಂದರು.
ಮುಂದಿನ ವರ್ಷದ ಹಾಸನಾಂಬ ಜಾತ್ರೋತ್ಸವಕ್ಕೆ ಈಗಿನಿಂದಲೇ ಸಿದ್ಧತೆ
ಈ ವರ್ಷದ ಹಾಸನಾಂಬ ಜಾತ್ರೋತ್ಸವದ ನೆನಪು ಮಾಸುವ ಮುನ್ನವೇ ಮುಂದಿನ ವರ್ಷದ ಜಾತ್ರೋತ್ಸವವನ್ನು ಅತ್ಯಂತ ಅದ್ಧೂರಿ ಹಾಗೂ ವ್ಯವಸ್ಥಿತವಾಗಿ ನಡೆಸಬೇಕೆನ್ನುವ ಉದ್ದೇಶದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಅವರು ಸಭೆ ನಡೆಸಿದ್ದಾರೆ. ಮುಂದಿನ ವರ್ಷಗಳಲ್ಲಿ ವಿದೇಶಿಗರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅತ್ಯಂತ ಅಗತ್ಯವಿದೆ. ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿಸಲು ಈಗಿನಿಂದಲೇ ತಯಾರಿ ಅಗತ್ಯವಿದೆ ಎಂದು ತಿಳಿಸಿದರು.
ಬೇಲೂರಲ್ಲಿ ಗಾಣಿಗರ ಸಂಘದಿಂದ ಗ್ರಾಮ ದೇವತೆಗಳ ಮೆರವಣಿಗೆ
ಗಾಣಿಗರ ಸಂಘದಿಂದ ಗ್ರಾಮ ದೇವತೆಗಳ ಮೆರವಣಿಗೆ ಹಾಗೂ ಉತ್ಸವ ಕಾರ್ಯಕ್ರಮಗಳನ್ನು ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಗಾಣಿಗರ ಬೀದಿಯಲ್ಲಿ ನಿರ್ಮಾಣ ಮಾಡಿದ್ದ ಬೃಹತ್ ವೇದಿಕೆ ಮೇಲೆ ಗುರುವಾರದಿಂದ ಆರಂಭವಾದ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ೭ ಗಂಟೆಯಿಂದ ಬೀದಿಯಲ್ಲಿ ದೇವತೆಗಳ ಮೆರವಣಿಗೆ ನಡೆಸಲಾಯಿತು.ಈ ವೇಳೆ ವಿದ್ಯುತ್ ದೀಪ, ಹಸಿರು ತೋರಣಗಳಿಂದ ಬೀದಿಯನ್ನು ಸಿಂಗರಿಸಲಾಗಿದ್ದು, ಬರುವ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಕಸಾಪ ಸಂಘಟನಾ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ
ಚನ್ನರಾಯಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಜಬೀಉಲ್ಲಾಬೇಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಪಟ್ಟಣದ ಬಾಗೂರು ರಸ್ತೆಯ ಟಿಪ್ಪು ವೃತ್ತದ ಬಳಿ ಸಂಜೆ ೬ ಗಂಟೆಯ ಸಮಯದಲ್ಲಿ ಅಬ್ದುಲ್‌ಹಕ್, ಅಬ್ದುಲ್ ಹಸನ್, ಫಹಾದ್, ಸಾದಿಕ್, ಶಮಿ, ಸಾಕಿಬ್ ಮತ್ತಿತರ ಸುಮಾರು ೧೦ಕ್ಕೂ ಹೆಚ್ಚು ಜನ ಗೂಂಡಾಗಳು ಏಕಾಏಕಿ ಸುತ್ತುವರೆದು ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಜಬೀಉಲ್ಲಾಬೇಗ್ ಆರೋಪಿಸಿದ್ದಾರೆ.
ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿ
ಜಿಲ್ಲಾ ಕ್ರೀಡಾಂಗಣ, ಯೂತ್ ಹಾಸ್ಟೆಲ್ ಬಳಿ ಇರುವ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಾಗೂ ಜಿಲ್ಲಾ ಹ್ಯಾಂಡ್‌ಬಾಲ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ೧೯ನೇ ರಾಜ್ಯ ಮಟ್ಟದ ಹೊನಲು ಬೆಳಕಿನ ೨೦ ವರ್ಷ ವಯೋಮಿತಿಯ ಪುರುಷರು ಮತ್ತು ಮಹಿಳೆಯರ ಹ್ಯಾಂಡ್‌ಬಾಲ್ ಪಂದ್ಯಾವಳಿಗೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಚಾಲನೆ ನೀಡಿದರು.
ವೀರಶೈವ ಎನ್ನುವುದು ಜಾತಿಯಲ್ಲ, ಅದೊಂದು ವಿಶ್ವಧರ್ಮ
ವೀರಶೈವ ಎನ್ನುವುದು ಜಾತಿಯಲ್ಲ, ಅದೊಂದು ಪರಿಪೂರ್ಣ ವಿಶ್ವಧರ್ಮ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಎಲ್ಲಾ ಗುರು ವಿರಕ್ತರು ಒಂದಾಗಿ ಧರ್ಮವನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ, ಹಿಂದೂ ಧರ್ಮಕ್ಕೆ ವೀರಶೈವ ಧರ್ಮವೇ ಆಧಾರಸ್ತಂಭವಾಗಿದೆ. ಪ್ರಾಚೀನ ಪರಂಪರೆ ಮಾನವ ಕಲ್ಯಾಣ ಬಯಸುವ ವೀರಶೈವ ಧರ್ಮವನ್ನು ಮತ್ತೆ ಒಗ್ಗೂಡಿಸುವ ಕೆಲಸಕ್ಕೆ ಎಲ್ಲರು ಕೈಜೋಡಿಸಬೇಕು ಎಂದು ಹೇಳಿದರು.
ಒತ್ತುವರಿ ಭೂಮಿ ಗುತ್ತಿಗೆಗಾಗಿ ಬೆಳೆಗಾರರ ಆಸಕ್ತಿ
ಒತ್ತುವರಿ ಭೂಮಿ ಗುತ್ತಿಗೆ ನೀಡುವ ವಿಚಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಬೆಳೆಗಾರರ ಪರವಾದ ನಿಲುವನ್ನು ಪ್ರಕಟಿಸಿ ಯೋಜನೆ ಕಾರ್ಯಗತಕ್ಕೆ ಅಂದಿನ ಕಂದಾಯ ಸಚಿವ ಆರ್. ಅಶೋಕ್‌ ಸಾಕಷ್ಟು ಚರ್ಚೆ ನಡೆಸಿದ್ದರು. ಯೋಜನೆ ಜಾರಿಯ ವೇಳೆಗೆ ಸರ್ಕಾರ ವಿಸರ್ಜನೆಯಾದ ಹಿನ್ನೆಲೆಯಲ್ಲಿ ಯೋಜನೆಗೆ ಗ್ರಹಣ ಹಿಡಿದಿತ್ತು. ಆದರೆ, ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾಫಿ ಬೆಳೆಗಾರರ ಸಂಘಟನೆಗಳ ಮುಖಂಡರ ನಿರಂತರ ಒತ್ತಡದ ಪರಿಣಾಮ ರಾಜ್ಯ ಸರ್ಕಾರ ಕೊನೆಗೂ ಯೋಜನೆಗೆ ಅಸ್ತು ಎಂದಿದೆ.
ಎಐಡಿಎಸ್‌ಒ ೭೦ನೇ ಸಂಸ್ಥಾಪನ ದಿನಾಚರಣೆ
ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯು ಕಳೆದ ೭೦ ವರ್ಷಗಳಿಂದ ಸಾರ್ವಜನಿಕ ಶಿಕ್ಷಣ ಉಳಿಸಲು ನಿರಂತರವಾಗಿ ವಿದ್ಯಾರ್ಥಿಗಳ ಸಮಸ್ಯೆಗಳ ವಿರುದ್ಧ ರಾಜಿರಹಿತ ಹೋರಾಟವನ್ನು ಸಂಘಟಿಸುತ್ತಾ ಬಂದಿದೆ. ವಿದ್ಯಾರ್ಥಿಗಳ ಹೋರಾಟದಿಂದಾಗಿ ಹಲವಾರು ನ್ಯಾಯಯುತ ಬೇಡಿಕೆಗಳು ಈಡೇರಿದೆ ಎಂದು ಎ.ಐ.ಡಿ.ಎಸ್.ಒ. ರಾಜ್ಯ ಖಜಾಂಚಿ ಸುಭಾಷ್ ಹೇಳಿದರು. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿಗೂ ಯಾವುದೇ ತಾರತಮ್ಯವಿಲ್ಲದೆ ಶಿಕ್ಷಣ ದೊರೆಯಬೇಕು ಎಂದರು.
ರುದ್ರಪಟ್ಟಣದಲ್ಲಿ ಸಂಗೀತೋತ್ಸವ ಸಮಿತಿಯಿಂದ ಪಂಚರತ್ನ ಕೃತಿ ಗಾಯನ
ಸಂಗೀತ ಹಾಗೂ ಸಾಹಿತ್ಯ ಎರಡು ಒಂದೇ. ಶಾಸ್ತ್ರೀಯ ಸಂಗೀತ, ಹಾಗೂ ಸಾಹಿತ್ಯ ಪ್ರಪಂಚದ ಐತಿಹಾಸಿಕ ಕ್ಷೇತ್ರವಾಗಿದೆ. ಪ್ರಪಂಚದ ಮೂಲೆಮೂಲೆಗಳಲ್ಲಿ ಸ್ಥಳೀಯ ಶಾಸ್ತ್ರೀಯ ಸಂಗೀತ ಸಂಸ್ಕೃತಿಯೊಂದಿಗೆ ಬೆರೆತು ಆತ್ಮೀಯವಾಗಿ ಹಿಡಿಯಬಲ್ಲ ಸಂಗೀತ ಸಾಧನ ಎಂದು ಗಾನಕಲಾ ಭೂಷಣ ವಿದ್ವಾನ್ ಡಾ. ಆರ್‌.ಕೆ. ಪದ್ಮನಾಭ ಅವರು ತಿಳಿಸಿದರು. ಪ್ರತಿವರ್ಷ ಕಾರ್ಯಕ್ರಮ ನಡೆಸಲು ಸಹಕಾರ ನೀಡಿ ಎಂದು ಆರ್.ಕೆ. ಪದ್ಮನಾಭ ಎಂದು ಮನವಿ ಮಾಡಿದರು.
ಜಾತ್ಯತೀತ ತತ್ವದ ನೆಲೆಗಟ್ಟಿನಲ್ಲಿ ಸುತ್ತೂರು ಕ್ಷೇತ್ರ ಮುನ್ನಡೆದಿದೆ
ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಬಸವಾದಿ ಶರಣರ ಆಶಯದಂತೆ ಜಾತ್ಯತೀತ ತತ್ವದ ನೆಲೆಗಟ್ಟಿನಲ್ಲಿ ಸುತ್ತೂರು ಶ್ರೀಕ್ಷೇತ್ರ ಮುನ್ನಡೆಯುವ ಮೂಲಕ ನಾಡಿನ ಕಲ್ಯಾಣ ಕಾರ್ಯಕ್ರಮಗಳಿಗೆ ಮೇಲ್ಪಂಕ್ತಿ ಹಾಕೊಟ್ಟಿದೆ ಎಂದು ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ ಬಣ್ಣಿಸಿದರು. ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರ ಆಶಯದಂತೆ ಹಸಿದವರಿಗೆ ಅನ್ನ, ಅಕ್ಷರ, ಅರಿವೆ, ಅರಿವು ನೀಡುವ ಮೂಲಕ ಅಜ್ಞಾನದ ಕತ್ತಲು ಕಳೆದು ಸುಜ್ಞಾನದ ಬೀಜ ಬಿತ್ತುತ್ತಿರುವುದು ಪ್ರಶಂಸನೀಯ ಎಂದರು.
  • < previous
  • 1
  • ...
  • 247
  • 248
  • 249
  • 250
  • 251
  • 252
  • 253
  • 254
  • 255
  • ...
  • 554
  • next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್‌
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved