ಕನ್ನಡ ಪತ್ರಿಕೋದ್ಯಮ ಅತ್ಯಂತ ಕ್ರಿಯಾಶೀಲವಾಗಿದೆ ಪತ್ರಿಕೋದ್ಯಮ ಎತ್ತ ಸಾಗಿದೆ ಮತ್ತು ಎಲ್ಲಿ ಎಡವುತ್ತಿದ್ದೇವೆ ಎಂಬುದನ್ನು ತಿಳಿದು, ಸರಿಪಡಿಸಿಕೊಂಡು ಸಾಗಬೇಕಿದೆ. ಆಸೆ, ಆಮಿಷಕ್ಕೆ ಬಲಿಯಾಗಿ, ಓಲೈಕೆ ರಾಜಕಾರಣ, ಓಲೈಕೆ ಪತ್ರಿಕೋದ್ಯಮ ಹಾಗೂ ಓಲೈಕೆಯ ಸಂಸ್ಥೆಗಳನ್ನು ದೂರವಿಡಿ, ಅವರ ಕಾರ್ಯಕ್ಕೆ ಛೀಮಾರಿ ಹಾಕಿ ಹಾಗೂ ಉತ್ತಮವಾಗಿ ಕೆಲಸ ಮಾಡುವ ವ್ಯಕ್ತಿಗಳನ್ನು ಗುರುತಿಸಿ, ಕ್ರಿಯಾಶೀಲರಾಗಿ, ಪ್ರಾಮಾಣಿಕವಾಗಿ, ಆತ್ಮಾಭಿಮಾನಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡುವ ಪತ್ರಕರ್ತರನ್ನು ಉತ್ತೇಜಿಸಿದಾಗ ಕಳಂಕ ರಹಿತವಾಗಿ ಪತ್ರಿಕೋದ್ಯಮಕ್ಕೆ ಸೇವೆ ಸಲ್ಲಿಸಲು ಸಾಧ್ಯವೆಂದು ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಅಭಿಪ್ರಾಯಪಟ್ಟರು.