ಊರಿನ ಹೆಸರು ಬದಲಿಸುವ ಅಧಿಕಾರ ನಿಮಗಿಲ್ಲ: ಪುರುಷೋತ್ತಮ್ ಬಿಳಿಮಲೆಕನ್ನಡ ಭಾಷೆಯ ಮೇಲೆ ಪ್ರತಿಯೊಬ್ಬರಿಗೂ ಸ್ವಾಭಿಮಾನ ಇರಬೇಕು. ಆದರೆ ಪ್ರಸ್ತುತ ಕನ್ನಡದ ಮೇಲೆ ಸ್ವಾಭಿಮಾನ ಕಡಿಮೆ ಆಗುತ್ತಿದ್ದು, ಇಂದು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಠ ಮಾಡುವವರು ಕನ್ನಡ ಮಾಧ್ಯಮದವರೇ. ಕನ್ನಡ ಒಂದು ಪರಿಶ್ರಮದ ಭಾಷೆಯಾಗಿ ಉಳಿಯಬೇಕು. ಇಂಗ್ಲೀಷ್, ಫ್ರೆಂಚ್, ಹಿಂದಿ, ಉರ್ದು ಎಲ್ಲಾ ಭಾಷೆ ಕಲಿಯಿರಿ. ಆದರೇ ಕನ್ನಡ ಮರೆಯದಿರಿ. ಹಾಗೆ ಮರೆತರೆ ಅದು ಭಾಷೆಯ ಆತ್ಮಹತ್ಯೆಯಾದಂತೆ.