ಗುಂಡಿಮಯವಾದ ರಾಜನಶಿರಿಯೂರು ರಸ್ತೆ ಹಳೇಬೀಡಿನ ಅಂಬೇಡ್ಕರ್ ಸರ್ಕಲ್ ವೃತ್ತದಿಂದ ರಾಜನಸಿರಿಯೂರು ಹೋಗುವ ರಸ್ತೆ ಅಧೋಗತಿ ತಲುಪಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳೇಬೀಡು ಬೇಲೂರು ತಾಲೂಕಿಗೆ ದೊಡ್ಡ ಹೋಬಳಿ ಕೇಂದ್ರವಾಗಿದ್ದು ಇಲ್ಲಿನ ಅಂಬೇಡ್ಕರ್ ಸರ್ಕಲ್ ವೃತ್ತದಿಂದ ಬಿದರಿಕೆರೆ ಪ್ರಥಮ ಹಂತದ ಕೋಡಿವರೆಗೆ ರಸ್ತೆ ತೀರಾ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಸ್.ಬಿ.ಎಮ್. ಬ್ಯಾಂಕ್, ಬಜಾಜ್ ಶೋರೂಮ್, ಹಲವಾರು ಅಂಗಡಿಗಳು, ತರಕಾರಿ ಮಾರುಕಟ್ಟೆ ಇದ್ದು ಜನರಿಗೆ ಓಡಾಡಲು ಭಾರಿ ತೊಂದರೆಯಾಗಿದೆ.ಜೊತೆಗೆ ಮಳೆಯ ಪ್ರಭಾವದಿಂದ ರಸ್ತೆ ತುಂಬೆಲ್ಲಾ ಗುಂಡಿಗಳಾಗಿದ್ದು, ದ್ವಿ ಚಕ್ರ ವಾಹನ ಸವಾರರ ಸ್ಥಿತಿ ಹೇಳತೀರದ್ದಾಗಿದೆ.